Powered By Blogger

Tuesday, December 25, 2012

ನಾನ್ ಒಂದು ಎಲೆ


ನಾನ್ ಒಂದು ಎಲೆ, ಪ್ರೀತಿಯ ಗಾಳಿ ಬೀಸಿದಾಗಲೇ......
ಬಂದು ಸೇರುವೆ ನಿನ್ನ ಮನಸ್ಸೆಂಬ ಪುಸ್ತಕದಲ್ಲೇ.
ಮರದಿಂದ ನಿನ್ನ ಮನಸೆರುವ ಪಯಣದ ಪ್ರಯತ್ನದಲ್ಲಿ, ನಾ ಹೆದರಿಸಿದ ಅಡಚಣೆಗಳು ಹತ್ತು ಹಲವು.
ಅದರಿಂದ ಮಾಸಿದೇ, ಕೊಂಚ ನನ್ನ ಹುರುಪು.
ಕೆಲವೊಮ್ಮೆ
ಗಾಳಿಯಲಿದ್ದ ಕಲ್ಮಶ ಅಂಟಿದೆ, ಇನೊಮ್ಮೆ ಕೆಟ್ಟಕೈಗಳ ಸ್ಪರ್ಶ ತಗುಲಿದೆ.
ಅಂತು ಇಂತೂ ಹೇಗೋ,
ನಿನ್ನೆಡೆಗೆ  ಬಂದು ನಿಂತಿರುವೆ.
ನಿನ್ನ ಮನಸೆಂಬ ಪುಸ್ಥಕದೊಳು ಬಿಡುವ ಮುನ್ನ, ಮಾಡು ನಿನ್ನ ಒಲವ ಝರಿಯ ಪನ್ನೀರ  ಸಿಂಚನ...
ಅದರಲ್ಲಿ ತೊಳೆದುಕೊಲ್ಲುವೆ ಅಂಟಿರುವ ಎಲ್ಲಾ
ಕಲ್ಮಷಗಳನ್ನ ....
ಮುಕ್ತನಾಗಿ ಸೇರುವೆ ನನ್ನ ಜೇವನದ ಗುರಿಯನ್ನ.


Monday, December 24, 2012

ಮರೆಯಾಗುವೆ


ಮರೆಯಾಗುವೆ ನಾ, ಮಂಜುಮಸುಕಲಿ....
ದಿನನಿತ್ಯದ ಹಾದಿಯಲಿ, ನಿನಗೆ ಅರಿಯದೇ ನಿನ್ನ ಜೊತೆಗೆ ನನ್ನ ಪಯಣ ಸಾಗಲಿ.
ಎಂದಾದರೊಮ್ಮೆ, ನೀ ನೆನೆದಾಗ ನನ್ನ, ಒಂದು ಮಂಜುಮಸುಕಿದ ಮೋಡ ಹಾದುಹೊಗುವುದುನಿನ್ನ.....
ಅದರಲ್ಲೇ  ಅವಿತು,ಕುಳಿತು, ನಾ ಸ್ಪರ್ಶಿಸುವೆ ನಿನ್ನ 





Saturday, December 22, 2012

ನೆನಪಕೊಡೆ


ನನ್ನ ನಗುವಿನಹಿಂದೆ ನೂರು ನೋವಿದೆ, ಪ್ರತಿಒಂದು ನೋವಿನಲು ಮರೆಯದ ನೆನಪಿದೆ.
ನೋವಿನಲು ನಗುವ ಈ ಮನ, ನೋವಿನ ಎಲ್ಲೆಮೀರಿದೆ, ಮುಗಿಲು ಮುಟ್ಟಿದೆ.
ಜೀವನದ ಪಕ್ಷಿನೋಟ ಕಂಡಕಣ್ಗಳು ಕುರುಡಾಗಿದೆ, ಹಳೆ ಬಿಂಬದ ಛಾಪು ಮನದಲ್ಲಿ ಹಾಗೇ ಉಳಿದಿದೆ.
ಕೇಕೆ ಹಾಕುತ್ತಿದ ಮನಸು ಈಗ ನೋವಿನ ಶಾಕೆ ಆಗಿದೆ.
ಮಳೆಯಭಯಕೆ ನಿನ್ನ ನೆನಪಕೊಡೆ ಹಿಡಿದೇ, ಕೊಡೆಯ ಕೆಳಗೆ ನಿನ್ನ ನೆನಪ
ಲೇ ನೆನೆದೆ....






ಕವಲುದಾರಿ


ಕವಲೊಡೆದನಂತರ ನನ್ನ ನಿನ್ನ ದಾರಿ,
ಹುಡುಕಿದೆ ನಾ, ನಿನ್ನ ಸೇರುವ ಹಲವು ದಾರಿ.
ಸಂಧಿಸಿಧ ಪ್ರತಿಒಂದು ಬಾರಿ, ನೀ ಆದೆ ಪರಾರಿ.
ಮಾತು ನಿಂತನಂತರ, ಮೌನ ಒಂದೇ ರಹದಾರಿ
ನಾ ಏನು ಮಾಡಲಿ, ನನ್ ಒಬ್ಬ ಆಲೆಮಾರಿ, ಹುಡುಕಿಹೇ ನಿನ್ನೆಡೆಗೆದಾರಿ!!!

 

ಹೃದಯ ಒಂದು ಕಾರ್ಖಾನೆ



ನನ್ನ ಹೃದಯ ಒಂದು ಕಾರ್ಖಾನೆ ಅದರಲ್ಲಿ ಬರುವುದು ಬಣ್ಣ ಬಣ್ಣದ ಯೋಚನೆ
ಪ್ರತಿದಿನ ಮುಂಜಾನೆ, ಅದೇ ಚಿಂತನೆ.... ಇದರಿಂದ ಮುಸ್ಸಂಜೆ ಮೂಡುವುದು ಸ್ವಲ್ಪ ಯಾತನೆ
ನಂತರ ನಿದ್ರೆ ಮಾಡುವಮುನ್ನ ಸ್ವಲ್ಪ ನಿಂಧನೆ... ಮತ್ತೆ ಸ್ವಪ್ನದಲ್ಲಿ ಅದೇ ಕಲ್ಪನೆ
ಇದುವೇ ನಮ್ಮ ಪ್ರತಿದಿನದ ಬಣ್
ನೆ 






ಮನಸಿನ ಮಾತು


ಹೇಳಲಾಗದ ಮನಸಿನ ಮಾತೊಂದು ತುಟಿಗಳ ಮದ್ಯದಲಿ ನಿಂತು, ಕಾದು ಕುಂತ!!
ಕವಿತೆಯ ಓಳ ಹೋಖ ಮಾತು.
ಓಲವ ಓಲೆಯಲಿ ಹರಿದುಬಂದ ಮಾತು,
ಜೀವನದ ಕದತೆರೆದ ಮಾತು,
ಆಗಿದೆ ಪ್ರೀತಿಯ ತುತ್ತು , ಮನದಲ್ಲಿ ಹಗೆ ಕೂತು. 



Add caption

Thursday, December 20, 2012

ಹೊಸ ದಾರಿ


ಹುಡುಕ ಹೊರಟಿಹೆ ನಾನು ಹೊಸದೊಂದು  ದಾರಿ,
ಹೊಸ ಗುರಿ ತಲುಪಲು ಕೈಲಿ ಹಿಡಿದು ಒಂದು ನವಿಲು ಗರಿ .
ಆದರೆ ಇಲ್ಲಿಗು ಹೊತ್ತು ತಂದಿರುವೆ ಹಳೆ ನೆನಪುಗಳ ಸಿರಿ,
ನಾ ಹೇಗೆ ಹೇಳಲಿ ಅದರ ವೈಕರಿ, ನನ್ನ ನಗುವಿಗೆ ಕಾರಣವಾದ ಆ ಪರಿ.
ದಾರಿ ಹೊಸದದರೇನು, ನಾ ನಗಲು ಬೇಕು ಸದಾ ನಿನ್ನ ಹೆಜ್ಜೆಗುರುತು, ಆಗ ಆಗ ಒಂಚೂರು ಸಿಹಿ ಮಾತು.
ಮೌನದಿಂದ ಹದಗೆಡುವುದು ಪರಿಸ್ತಿತಿ, ಬೇಡ ಇನ್ನ ಆ ಗತಿ.
ಅರಿತಿಹೆ ನಾನು ನನ್ನ ಜೀವನದ ಗತಿ, ಕೇವಲ ಮಾತೆಂಬ ಸುಂಕ ಕಟ್ಟಿದರೆ ಎನ್ಕಲ್ಕೊಥೀ   ?



Tuesday, December 18, 2012

ಒಲವ ಕನ್ನಡಿ


ಒಲವ ಕನ್ನಡಿ ಚೂರಾದರೇನು, ಒಂದೊಂದು ಚೂರಲು ನಿನ್ನ ಕಾಣುವೆ ನಾನು.
ಮೊದಲು ಕಾಣುತಿತ್ತು ಒಂದೇ ಬಿಂಬ, ಈಗ ಸಾವಿರಾರು ಕಣ್ ತುಂಬಾ ,
ನೀ ಮಾಡಿದರು ಪಲಾಯನ, ನನ್ನ ನಯನಗಳಿಗೆ ನಿನ್ನದೇ ಜ್ಞಾನ,
ನಿನ್ನ ನಗುವ ನೋಡಿ ಹುಟ್ಟಿತು ಎದೆಯಲಿ ಪ್ರೀತಿಯ ಮಗು, ನೀ ಇಲ್ಲದೆ ಕಳೆದುಕೊಂಡೆ ನನ್ನ ನಗು.



ಒಳನೋಟ


ನೀ ಕಾಣದ ಕೋಣೆಯಲ್ಲಿ ಕೂತು ಕಿಟಕಿಯಾ ಹೊರನೋಡಿದೆ ನಾನು,
ಹೊಳೆವ ಚಂದ್ರನ ಚಿತ್ರದ ಪಕ್ಕ ಮಿನುಗುವ ತಾರೆ ನೀನು, ಸಿಗದ ಬಯಕೆ ನೀನು,
ಬರಿ ಹೋಲಿಕೆಯಲ್ಲೇ ಓಲಾಡಿರುವ ಮೂಡ ನಾನು...... 


ನೆನಪುಗಳ ರಂಗೋಲಿ


ನನ್ನ ನೆರಳಲಿ ಬಿಡಿಸಿಹೆ ನಿನ್ನ ನೆನಪುಗಳ ರಂಗೋಲಿ, ಹೊತ್ತು ಸಾಗಿರುವೆ ನಾ ಹೋದಲ್ಲಿ.
ಬೆತಲ್ಲಾಗಿದ ನನ್ನ ಮನಸಿಗೆ ನಿನ್ನ ನೆನಪುಗಳ ಉಡುಗೆ ತೊಡುಗೆ,
ಕಗ್ಗತಲ್ಲಲಿ ನಿನ್ನ ನೆನಪ ಪಲ್ಲಕಿಯಲಿ ಹೋತು ಒಲವ, ಹೊರಟಿಹೆ ನಾನು ಮೆರವಣಿಗೆ. 
ಮುಂಜಾನೆ ಮತ್ತೆ ನೆರಳು ಮೂಡಿದಾಗ ಹಾಕುವೆ ಅದೇ ನೆನಪುಗಳ ರಂಗೋಲಿ, 
ಇನ್ನಾದರೂ ಬೀಸಲಿ ಪ್ರೀತಿಯ ತಂಗಾಳಿ.....