Powered By Blogger

Friday, April 26, 2013

ಹೊರಜಾರಿತು ಆ ನೀರಿನ ಬಿಂದು!!!

ಹೃದಯಬಡಿತಕ್ಕೆ ನಯನಗಳ ನರ್ಥನ.... ಎಧೆಯಲ್ಲಿ ತಲ್ಲಣ!!!!
ಮೂಡಿಸಿತು ನಯನಗಳಲ್ಲಿ ನೀರಿನ ದಿಬ್ಭಣ.
ಹೊರಬರದೆ, ಒಳಗೂಇರದೆ ಮಿಂಚಲು ಆ ನೀರಿನ ಸಿಂಚನ..
ಆ ಮಿಂಚಲ್ಲಿ ನಿನ್ನ ಕಾಣುವ ನನ್ನ ಮನದ ಪ್ರಯತ್ನ!!!
ಕೊನೆಗೂ ಹೊರಜಾರಿತು ಆ ನೀರಿನ ಬಿಂದು!!!
ಆದರೇನು ಹೊರಜಾರುವ ಮುನ್ನ ಮೂಡಿದೆ ಅದೇ ನಯನಗಳಲ್ಲಿ ಮತ್ತೊಂದು ಬಿಂದು!!!

 

 

Saturday, April 6, 2013

ಕೊನೆಮಾತು ಕಳುಹಿಸಿರುವೆ ನಿನ್ನ ಕರೆಯಲು!!!

ಕೊನೆಮಾತು ಕಳುಹಿಸಿರುವೆ ನಿನ್ನ ಕರೆಯಲು!!!
ಮನಸಗುತಿಲ್ಲ ನಿನ್ನ ಬಿಟ್ಟಿರಲು.
ಎಧೆಯಲಿ ನೀ ಇಟ್ಟ ಕಾಲ್ಗೆಜ್ಜೆ ಸದ್ದು, ಸದಿಲ್ಲದೆ ಮೌನ ಬೀರಿದೇ ಇಂದು!!!
ಈ ಮಾತಿನ ಅಪೇಕ್ಷೆ, ನಿನ್ನ ನೀರಿಕ್ಷೆ!!!
ಹೇಳಬಯಸುವೆ ನಿನ್ನ ನಿರ್ಧಾರಕ್ಕೆ ನನ್ನ ಧಿಕ್ಕಾರ, ಆದರು ಮಾಡುವೆ ಸಹಕಾರ.
ಬೀಳ್ಕೊಟ್ಟು ನಿನಗೆ, ನಾ ಬದುಕಿರಲಿ ಹೇಗೆ ???
ನೀನೆ ಮಾಡಬೇಕು, ಒಂದು ಸಣ್ಣ ಚಮತ್ಕಾರ, ಸದಾ ನೀ ನನ್ನ ಜೊತೆ ಇರುವ ಹಾಗೆ...........

 

 


 

Saturday, March 30, 2013

ತಲ್ಲಣದ ಥೆರು

ತೆರೆ ಮರೆಯ ಥೆರನ್ನು ತಲ್ಲಣದ ಹಗ್ಗದಲ್ಲಿ ಎಳೆದು ಸಾಗಿರುವೆ...
ಈ ಪಯಣದ ಸಂಕಷ್ಟದ ಪೀಡಿತ ನಾನು, ಪ್ರೇಮ ದಾಹದಿ ಬಳಲಿರುವೆ!!!
ಚಿವುಟುತ್ತ ಚಿಗುರೊಡೆದ ಕನಸ, ನಾ ಬದುಕಿರುವೆ...
ಮನಸ ಒಂದು ಅಲೀಯಲಿ, ಪ್ರೀತಿಯಾ  ಎಳೆಯ ಹುಡುಕುತ!!!

 

 

Friday, March 1, 2013

ಭರಧ ಭೀಕರತೆ

ಅವಳಿಲ್ಲದ ಭರಧ ಭೀಕರತೆ ನಾ ಹೇಗೆ ಹೇಳಲಿ, ಭರದಲು ನೀರಿಗೆ ಭರ ಇಲ್ಲ.......
ಆದರು ನಿಂತ ಜೀವನದ ಧೋಣಿ ಮುಂದೆ ಸಾಗಲಿಲ್ಲ....!!!
ಕಣ್ಗಳ ಹಿಂದಿನ ಭಾವನೆಗಳಿಗೆ  ಬೆಲೆಇಲ್ಲ, ಮೂಕವಾದ ಮನಸಿಗೆ ಮತ್ತೆ ಮಾತಾಡುವ ಶಕ್ತಿ ಇಲ್ಲ!!!
ಎಧೆಒಡ್ಡಿ ನಿಂತಿರಲು ಬಾನಿನೆಡೆಗೆ ಮುಖ ಮಾಡುತ್ತ, ಕಣ್ಸನ್ನೆ ಯಲಿ ಇಛೆಯಾ ತೋರುತ್ತ,
ನೋವನು ಮರೆಯಲು ಪ್ರಯತ್ನಿಸುತ್ತ.........
ಆದರು ಮಲಗುವ ಮುನ್ನ ಕಣ್ಮುಂದೆ ಬರುವ ಅವಳನ್ನ, ನಾ ಹೇಗೆ ಮರೆತು ಬಾಳಲಿ!!!!!!!!!!

 


 

 

 

Saturday, February 23, 2013

ಕಳೆದುಕೊಳ್ಳುವ ಮುನ್ನ

ಕಳೆದುಕೊಳ್ಳುವ ಮುನ್ನ, ಒಮ್ಮೆ ಕೈ ಹಿಡಿಯುವಾಸೆ,

ಕಣ್ಣಲ್ಲಿ ತುಂಬಿದ ಪ್ರೀತಿಯ ಹೊರಚೆಲ್ಲುವಾಸೆ.

ನಿನ್ನೊಡನೆ ಕೊಂಚ ದೂರ ಜೊತೆ ನಡಯುವಾಸೆ..........

ಹಾಗೇ ಮಾತಿನ ಪಲ್ಲಕ್ಕಿಯಲಿ ಭಾವಮೆರವಣಿಗೆ ಹೊರಡಿಸಿ, ನಿನಗೆ ಬೀಳ್ಕೊಡುವಾಸೆ.

ನೀ ಹೊರಡುವಮುನ್ನ, ಹಿಂದಿರುಗಿ ನನ್ನ ಹುಡುಕುವ ನೋಟವನ್ನ, ನೋಡಿ ಕಣ್ಣ ತುಂಬಿಕೊಳುವಾಸೆ !!!


Saturday, February 9, 2013

ವೇದನೆಯ ನಿವೇದನೆ

ಈ ವೇದನೆಯ ನಿವೇದನೆ, ನಿನಗೆ ಈ ಮನಸ ಅರ್ಪಣೆ.
ಬರುವ ಪ್ರಥಿ ಯೋಚನಗಳು ನಿನಗೆ ಸಮರ್ಪಣೆ!!!
ನಿರೀಕ್ಷೇಯಾ ನಿಟ್ಟುಸಿರಲಿ ಭಾವದ ಬಣ್ಣನೆ....... ಜಿನಿಗುವ ಝರಿ
ಕಣ್ಗಳಲ್ಲೀ  ಹಗೆ ಸುಮ್ಮನೆ!!!
ಕಣ್ಮುಚ್ಚಿ ಗಾಳಿಯಲಿ ಕರೆಯುವೆ ನಿನ್ನ ಹೆಸರ.. "ತುಸು ಮೆಲ್ಲನೇ"!!!

 

 

Wednesday, January 23, 2013

ಜಡಿಮಳೆ

ನಿನ್ನ ಪ್ರೀತಿಯ ಜಡಿಮಳೆ ಯಲಿ ನೆನದ
ಈ ಮನದ ಜಡ, ಜರಿಯಲು ಕಳೆವುದು
ಜನುಮದ ಹರೆಯಾ!!!
ನಿದ್ದಯ ಪರದೆಯಲು ಕಳೆಯ ಬಯಸುವೆ ನಿನ್ನ ಜೊತೆ ಸಮಯ :(