Powered By Blogger

Saturday, February 23, 2013

ಕಳೆದುಕೊಳ್ಳುವ ಮುನ್ನ

ಕಳೆದುಕೊಳ್ಳುವ ಮುನ್ನ, ಒಮ್ಮೆ ಕೈ ಹಿಡಿಯುವಾಸೆ,

ಕಣ್ಣಲ್ಲಿ ತುಂಬಿದ ಪ್ರೀತಿಯ ಹೊರಚೆಲ್ಲುವಾಸೆ.

ನಿನ್ನೊಡನೆ ಕೊಂಚ ದೂರ ಜೊತೆ ನಡಯುವಾಸೆ..........

ಹಾಗೇ ಮಾತಿನ ಪಲ್ಲಕ್ಕಿಯಲಿ ಭಾವಮೆರವಣಿಗೆ ಹೊರಡಿಸಿ, ನಿನಗೆ ಬೀಳ್ಕೊಡುವಾಸೆ.

ನೀ ಹೊರಡುವಮುನ್ನ, ಹಿಂದಿರುಗಿ ನನ್ನ ಹುಡುಕುವ ನೋಟವನ್ನ, ನೋಡಿ ಕಣ್ಣ ತುಂಬಿಕೊಳುವಾಸೆ !!!


Saturday, February 9, 2013

ವೇದನೆಯ ನಿವೇದನೆ

ಈ ವೇದನೆಯ ನಿವೇದನೆ, ನಿನಗೆ ಈ ಮನಸ ಅರ್ಪಣೆ.
ಬರುವ ಪ್ರಥಿ ಯೋಚನಗಳು ನಿನಗೆ ಸಮರ್ಪಣೆ!!!
ನಿರೀಕ್ಷೇಯಾ ನಿಟ್ಟುಸಿರಲಿ ಭಾವದ ಬಣ್ಣನೆ....... ಜಿನಿಗುವ ಝರಿ
ಕಣ್ಗಳಲ್ಲೀ  ಹಗೆ ಸುಮ್ಮನೆ!!!
ಕಣ್ಮುಚ್ಚಿ ಗಾಳಿಯಲಿ ಕರೆಯುವೆ ನಿನ್ನ ಹೆಸರ.. "ತುಸು ಮೆಲ್ಲನೇ"!!!